ಕರೆಂಟ್ ಬಿಲ್ ₹0! ಸೋಲಾರ್ ಹಾಕಿಸಲು ₹78,000 ಸಿಗುತ್ತೆ; ಇಂದೇ ಅರ್ಜಿ ಹಾಕಿ!

ನೀವು ಪ್ರತಿ ತಿಂಗಳು ಬರುವ ದುಬಾರಿ ಕರೆಂಟ್ ಬಿಲ್ ನೋಡಿ ಸುಸ್ತಾಗಿದ್ದೀರಾ? ಇನ್ಮುಂದೆ ಆ ತಲೆನೋವೇ ಬೇಡ. ಕೇಂದ್ರ ಸರ್ಕಾರವು ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗಾಗಿ ಒಂದು ಅದ್ಭುತ ಯೋಜನೆಯನ್ನು ತಂದಿದೆ. ಅದೇ ‘ಪ್ರಧಾನಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ’ (PM Surya Ghar Muft Bijli Yojana).

ಈ ಯೋಜನೆಯಡಿ ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಅಳವಡಿಸಿಕೊಂಡರೆ ಬರೋಬ್ಬರಿ ₹78,000 ವರೆಗೆ ನೇರ ಸಬ್ಸಿಡಿ ಸಿಗಲಿದೆ. ಅಷ್ಟೇ ಅಲ್ಲ, ಮುಂದಿನ 20 ರಿಂದ 25 ವರ್ಷಗಳ ಕಾಲ ಉಚಿತವಾಗಿ ವಿದ್ಯುತ್ ಪಡೆಯುವ ಜೊತೆಗೆ, ಹೆಚ್ಚುವರಿ ಕರೆಂಟ್ ಅನ್ನು ಸರ್ಕಾರಕ್ಕೆ ಮಾರಿ ಕೈತುಂಬಾ ಆದಾಯವನ್ನೂ ಗಳಿಸಬಹುದು.

pm surya ghar scheme subsidy

ಹಾಗಾದರೆ ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಷ್ಟು ಸಬ್ಸಿಡಿ ಸಿಗುತ್ತೆ? ಯಾರೆಲ್ಲಾ ಅರ್ಹರು? ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ…

ಸೋಲಾರ್ ಸಾಮರ್ಥ್ಯಕ್ಕೆ ಅನುಗುಣವಾಗಿ ಸಿಗುವ ಸಬ್ಸಿಡಿ ವಿವರ:

ಸರ್ಕಾರವು ನೀವು ಅಳವಡಿಸುವ ಸೋಲಾರ್ ಪ್ಯಾನಲ್ ಸಾಮರ್ಥ್ಯದ (Kilowatt) ಆಧಾರದ ಮೇಲೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ (DBT ಮೂಲಕ) ಹಣವನ್ನು ಜಮಾ ಮಾಡುತ್ತದೆ.

ಸೋಲಾರ್ ಸಾಮರ್ಥ್ಯಅಂದಾಜು ವೆಚ್ಚಸರ್ಕಾರದ ಸಬ್ಸಿಡಿವಾರ್ಷಿಕ ಉಳಿತಾಯಮಾಸಿಕ ಉತ್ಪಾದನೆ
1 KW₹60,000 – ₹80,000₹30,000₹9,600~100 ಯೂನಿಟ್
2 KW₹1,20,000 – ₹1,60,000₹60,000₹21,600~200 ಯೂನಿಟ್
3 KW (ಅಥವಾ ಹೆಚ್ಚು)₹1,80,000 – ₹2,40,000₹78,000₹36,000~300 ಯೂನಿಟ್

Leave a Comment