2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ! ಫೋನ್‌ನಲ್ಲೇ ಮಾರ್ಕ್ಸ್‌ ಕಾರ್ಡ್ ಡೌನ್‌ಲೋಡ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ!

ಕರ್ನಾಟಕಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಎದೆಬಡಿತ ಜೋರಾಗಿದೆ. 2026ನೇ ಸಾಲಿನ ದ್ವಿತೀಯ ಪಿಯುಸಿ (Karnataka 2nd PUC) ವಾರ್ಷಿಕ ಪರೀಕ್ಷೆಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಎಲ್ಲರ ಕಣ್ಣು ರಿಸಲ್ಟ್ ಮೇಲಿದೆ. “ನನಗೆ ಎಷ್ಟು ಅಂಕ ಸಿಗಬಹುದು?”, “ಯಾವ ದಿನಾಂಕದಂದು ಫಲಿತಾಂಶ ಪ್ರಕಟವಾಗುತ್ತದೆ?” ಎಂಬ ಆತಂಕ ಮತ್ತು ಕುತೂಹಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರಲ್ಲೂ ಮನೆಮಾಡಿದೆ

2nd PUC Result

ಈ ಕಾಯುವಿಕೆಗೆ ಶೀಘ್ರದಲ್ಲೇ ತೆರೆಬೀಳಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ವೇಗಗೊಳಿಸಿದ್ದು, ಫಲಿತಾಂಶ ಪ್ರಕಟಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಫಲಿತಾಂಶ ಯಾವಾಗ?

ಹಿಂದಿನ ವರ್ಷಗಳ ಟ್ರೆಂಡ್ ಮತ್ತು ಇಲಾಖೆಯ ಮೂಲಗಳ ಪ್ರಕಾರ, ವಿದ್ಯಾರ್ಥಿಗಳು ಏಪ್ರಿಲ್ ತಿಂಗಳಲ್ಲೇ ಸಿಹಿ ಸುದ್ದಿ ಕೇಳುವ ಸಾಧ್ಯತೆ ದಟ್ಟವಾಗಿದೆ. ವರದಿಗಳ ಪ್ರಕಾರ, 2026ರ ಏಪ್ರಿಲ್ 10 ರ ಸುಮಾರಿಗೆ ದ್ವಿತೀಯ ಪಿಯುಸಿ ಫಲಿತಾಂಶ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.

ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ವಿದ್ಯಾರ್ಥಿಗಳು ಒಮ್ಮೆಲೇ ವೆಬ್‌ಸೈಟ್‌ಗೆ ಲಾಗಿನ್ ಆಗುವುದರಿಂದ ಸರ್ವರ್ ಸ್ಲೋ ಆಗುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ಯಾವುದೇ ಟೆನ್ಷನ್ ಇಲ್ಲದೆ, ನಿಮ್ಮ ಮೊಬೈಲ್‌ನಲ್ಲೇ ಸುಲಭವಾಗಿ ರಿಸಲ್ಟ್ ಚೆಕ್ ಮಾಡುವುದು ಮತ್ತು ಮಾರ್ಕ್ಸ್‌ ಕಾರ್ಡ್ (Marks Card) ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ವಿಧಾನ 1: ಅಧಿಕೃತ ವೆಬ್‌ಸೈಟ್ ಮೂಲಕ :

ಫಲಿತಾಂಶ ಹೊರಬಿದ್ದ ತಕ್ಷಣ ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ:

  1. ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮಂಡಳಿಯ ಅಧಿಕೃತ ಪೋರ್ಟಲ್ karresults.nic.in ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ನಿಮಗೆ ‘2nd PUC Result 2026’ ಎಂಬ ಲಿಂಕ್ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
  3. ಈಗ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹಾಲ್ ಟಿಕೆಟ್‌ನಲ್ಲಿರುವ ‘ರಿಜಿಸ್ಟ್ರೇಷನ್ ನಂಬರ್’ (Registration Number) ಅನ್ನು ನಮೂದಿಸಿ.
  4. ನಂತರ ನಿಮ್ಮ ವಿಷಯವನ್ನು (Subject Combination/Stream – Arts, Commerce, Science) ಆಯ್ಕೆ ಮಾಡಿ.
  5. ಕೊನೆಯದಾಗಿ ‘Submit’ ಬಟನ್ ಒತ್ತಿ.
  6. ಕ್ಷಣಾರ್ಧದಲ್ಲಿ ನಿಮ್ಮ ಫಲಿತಾಂಶ ಮತ್ತು ವಿಷಯವಾರು ಅಂಕಗಳು ಪರದೆಯ ಮೇಲೆ ಮೂಡುತ್ತವೆ.
  7. ಭವಿಷ್ಯದ ಉಲ್ಲೇಖಕ್ಕಾಗಿ ಇದನ್ನು PDF ರೂಪದಲ್ಲಿ ಸೇವ್ ಮಾಡಿಕೊಳ್ಳಿ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ.

ವಿಧಾನ 2: ಸರ್ವರ್ ಡೌನ್ ಇದ್ದರೆ ಚಿಂತೆ ಬೇಡಿ :

ವೆಬ್‌ಸೈಟ್ ಓಪನ್ ಆಗದಿದ್ದರೆ, ಕೇಂದ್ರ ಸರ್ಕಾರದ ಸುರಕ್ಷಿತ ಆ್ಯಪ್ ಆದ ‘ಡಿಜಿಲಾಕರ್’ ಮೂಲಕ ನೀವು ನಿಮ್ಮ ಡಿಜಿಟಲ್ ಮಾರ್ಕ್ಸ್‌ ಕಾರ್ಡ್ ಪಡೆಯಬಹುದು:

  1. ನಿಮ್ಮ ಮೊಬೈಲ್‌ನಲ್ಲಿ DigiLocker ಆ್ಯಪ್ ಡೌನ್‌ಲೋಡ್ ಮಾಡಿ ಅಥವಾ ವೆಬ್‌ಸೈಟ್‌ಗೆ ಹೋಗಿ.
  2. ನಿಮ್ಮ ಆಧಾರ್ ಕಾರ್ಡ್‌ಗೆ (Aadhaar Card) ಲಿಂಕ್ ಆಗಿರುವ ಮೊಬೈಲ್ ನಂಬರ್ ಬಳಸಿ ಸೈನ್-ಇನ್ (Sign-in) ಆಗಿ.
  3. ಆ್ಯಪ್‌ನಲ್ಲಿರುವ ‘Search Documents’ ವಿಭಾಗಕ್ಕೆ ಹೋಗಿ.
  4. ಅಲ್ಲಿ ಹುಡುಕಾಟದ ಬಾಕ್ಸ್‌ನಲ್ಲಿ ‘KSEAB’ (Karnataka School Examination and Assessment Board) ಎಂದು ಟೈಪ್ ಮಾಡಿ.
  5. ಬರುವ ಆಯ್ಕೆಗಳಲ್ಲಿ ‘Class XII Marksheet’ (ದ್ವಿತೀಯ ಪಿಯುಸಿ) ಎಂಬುದನ್ನು ಆರಿಸಿ.
  6. ನಿಮ್ಮ ಪರೀಕ್ಷೆಯ ವರ್ಷ (2026) ಮತ್ತು ರಿಜಿಸ್ಟರ್ ನಂಬರ್ ನಮೂದಿಸಿ.
  7. ‘Get Document’ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಅಧಿಕೃತ ಡಿಜಿಟಲ್ ಮಾರ್ಕ್ಸ್‌ ಕಾರ್ಡ್ ಓಪನ್ ಆಗುತ್ತದೆ.

ಇದನ್ನು ನೀವು ಮೊಬೈಲ್‌ನಲ್ಲೇ ಸೇವ್ (Save) ಮಾಡಿಕೊಳ್ಳಬಹುದು ಮತ್ತು ಇದು ಎಲ್ಲಾ ಕಡೆ ಅಸಿಂಧುವಾಗಿರುತ್ತದೆ.

ಮುಖ್ಯ ಸೂಚನೆ: ವಿದ್ಯಾರ್ಥಿಗಳು ಫಲಿತಾಂಶದ ನಿಖರ ದಿನಾಂಕಕ್ಕಾಗಿ ಅಧಿಕೃತ ಪ್ರಕಟಣೆಯನ್ನು ಮಾತ್ರ ನಂಬಬೇಕು. ಮಂಡಳಿಯು ದಿನಾಂಕವನ್ನು ಘೋಷಿಸಿದ ತಕ್ಷಣ ನಾವು ಇಲ್ಲಿ ಅಪ್‌ಡೇಟ್ ಮಾಡುತ್ತೇವೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಶಯಗಳು.

Leave a Comment