ಶಾಲಾ ಮಕ್ಕಳಿಗೆ & ಶಿಕ್ಷಕರಿಗೆ ಬಿಗ್ ಶಾಕ್! ಜೂನ್ 1ರಿಂದ ಹೊಸ ರೂಲ್ಸ್: ತಪ್ಪಿದರೆ ಕಷ್ಟ ಗ್ಯಾರಂಟಿ!

ಬೇಸಿಗೆ ರಜೆಯ ಮಜಾದಲ್ಲಿದ್ದ ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಶಿಕ್ಷಣ ಇಲಾಖೆ ಈಗಿನಿಂದಲೇ ಶಾಕ್ ನೀಡಲು ಆರಂಭಿಸಿದೆ. ಜೂನ್ 1ರಿಂದ ರಾಜ್ಯಾದ್ಯಂತ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ಈ ಬಾರಿ ಶಿಕ್ಷಣ ಇಲಾಖೆ ಅತ್ಯಂತ ಕಠಿಣ ಹಾಗೂ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ನಿಯಮಗಳನ್ನು ಮೀರಿದರೆ ಕಷ್ಟ ತಪ್ಪಿದ್ದಲ್ಲ.

ಹಾಗಾದರೆ ಈ ಬಾರಿ ಶಾಲೆಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ನೀವೇನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ, ಕೊನೆವರೆಗೂ ಓದಿ…

karnataka school reopen date 2026

1. ಬಯೋಮೆಟ್ರಿಕ್/ಡಿಜಿಟಲ್ ಹಾಜರಿ ಕಡ್ಡಾಯ!

ಇನ್ಮುಂದೆ ಶಾಲೆಗೆ ಲೇಟಾಗಿ ಬರೋ ಹಾಗೆ ಇಲ್ಲ, ನೆಪ ಹೇಳೋ ಹಾಗೂ ಇಲ್ಲ! ಹೌದು, ಈ ಬಾರಿ ಕೇವಲ ಶಿಕ್ಷಕರಿಗೆ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೂ ಡಿಜಿಟಲ್ ಹಾಜರಾತಿಯನ್ನು (Digital Attendance) ಕಡ್ಡಾಯಗೊಳಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಈ ನಿಯಮ ಅನ್ವಯವಾಗಲಿದೆ.

2. ಮಳೆಗಾಲಕ್ಕೂ ಮುನ್ನ ಶಾಲಾ ಕಟ್ಟಡಗಳ ಸುರಕ್ಷತೆ!

ಮಳೆಗಾಲ ಆರಂಭವಾಗುತ್ತಿರುವುದರಿಂದ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಶಾಲಾ ಕಟ್ಟಡಗಳು, ಶೌಚಾಲಯಗಳು ಅಥವಾ ಅಡುಗೆ ಕೋಣೆಗಳು ಶಿಥಿಲಗೊಂಡಿದ್ದರೆ (ಹಾಳಾಗಿದ್ದರೆ), ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ದುರಸ್ತಿ ಮಾಡಬೇಕು ಅಥವಾ ತೆರವುಗೊಳಿಸಬೇಕು ಎಂದು ಇಲಾಖೆ ಖಡಕ್ ಸೂಚನೆ ನೀಡಿದೆ.

3. ಈ ವರ್ಷದಿಂದಲೇ ‘ದ್ವಿಭಾಷಾ ಬೋಧನೆ’ ಆರಂಭ!

ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಯಲು ಬಯಸುವವರಿಗೆ ಗುಡ್ ನ್ಯೂಸ್. ಇಲಾಖೆಯಿಂದ ಪೂರ್ವಾನುಮತಿ ಪಡೆದಿರುವ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿಯನ್ನು (Bilingual Medium) ಅನುಷ್ಠಾನಕ್ಕೆ ತರಲಾಗುತ್ತಿದೆ. ವಿಶೇಷವಾಗಿ ಈ ವರ್ಷದಿಂದಲೇ ಉರ್ದು-ಇಂಗ್ಲೀಷ್ ದ್ವಿಭಾಷಾ ಮಾಧ್ಯಮ ಕೂಡ ಆರಂಭವಾಗಲಿದೆ.

ಪ್ರಮುಖ ದಿನಾಂಕಗಳು:

ನಿಮ್ಮ ಶಾಲೆಯ ಸಿದ್ಧತೆಗಳು ಈ ದಿನಾಂಕಗಳ ಒಳಗಾಗಿ ಮುಗಿಯಬೇಕು:

  • ಮೇ 28: ಶಾಲೆಗಳ ಸಂಪೂರ್ಣ ಸ್ವಚ್ಛತೆ, ಕುಡಿಯುವ ನೀರು ಮತ್ತು ಸುರಕ್ಷತಾ ತಪಾಸಣೆಗಳನ್ನು ಪೂರ್ಣಗೊಳಿಸಲು ಕೊನೆಯ ದಿನ.
  • ಮೇ 29: ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.
  • ಜೂನ್ 1: ಶಾಲಾ ಪ್ರಾರಂಭೋತ್ಸವ ಹಾಗೂ ಮಕ್ಕಳ ದಾಖಲಾತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭ.
  • ಜೂನ್ 30: ದಾಖಲಾತಿ ಆಂದೋಲನ ಮುಕ್ತಾಯಗೊಳ್ಳಲಿದೆ.

ಮುಖ್ಯ ಗಮನ: 6 ರಿಂದ 14 ವರ್ಷದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ. ನಿಮ್ಮ ಸುತ್ತಮುತ್ತ ಇಂತಹ ಮಕ್ಕಳಿದ್ದರೆ ತಕ್ಷಣ ಶಾಲೆಗೆ ದಾಖಲಿಸಿ.

Leave a Comment