ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಕೆಲಸ! ಪರೀಕ್ಷೆನೇ ಇಲ್ಲ, ಸಂದರ್ಶನದ ಮೂಲಕ ಇಂದೇ ಆಯ್ಕೆ

ಬೆಂಗಳೂರು: ಐಟಿ ಹಬ್ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಬೇಕು ಎಂದುಕೊಂಡಿರುವ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಯಾವುದೇ ಲಿಖಿತ ಪರೀಕ್ಷೆಯ ತಲೆನೋವಿಲ್ಲದೆ, ಕೇವಲ ಒಂದೇ ಒಂದು ಇಂಟರ್ವ್ಯೂ ಮೂಲಕ ನೀವು ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸಿಎಸ್‌ಐಆರ್ – ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳು (CSIR-NAL) ಖಾಲಿ ಇರುವ ವಿವಿಧ ಪ್ರಾಜೆಕ್ಟ್ ಸ್ಟಾಫ್ (Project Staff) ಹುದ್ದೆಗಳ ಭರ್ತಿಗಾಗಿ ಭರ್ಜರಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಸಂಪೂರ್ಣವಾಗಿ ತಾತ್ಕಾಲಿಕ ಮತ್ತು ಒಪ್ಪಂದದ ಆಧಾರದ ಮೇಲೆ ಈ ನೇಮಕಾತಿ ನಡೆಯುತ್ತಿದ್ದು, ಇಂದಿನಿಂದಲೇ (ಮೇ 26) ಸಂದರ್ಶನ ಪ್ರಕ್ರಿಯೆ ಆರಂಭವಾಗಿದೆ.

csir nal recruitment 2026 online apply

ಹುದ್ದೆಗಳ ಹೈಲೈಟ್ಸ್ ಇಲ್ಲಿದೆ:

  • ಒಟ್ಟು ಹುದ್ದೆಗಳು: 21 (ಪ್ರಾಜೆಕ್ಟ್ ಅಸಿಸ್ಟೆಂಟ್ ಮತ್ತು ಅಸೋಸಿಯೇಟ್)
  • ಉದ್ಯೋಗ ಸ್ಥಳ: ಕೋಡಿಹಳ್ಳಿ, ಬೆಂಗಳೂರು.
  • ಆಯ್ಕೆ ವಿಧಾನ: ಕೇವಲ ನೇರ ಸಂದರ್ಶನ (Walk-in-Interview) ಮೂಲಕ.
  • ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಯಾರಿಗೆಲ್ಲ ಅವಕಾಶ? (ವಿದ್ಯಾರ್ಹತೆ)

ನೀವು SSLC, ITI, ಡಿಪ್ಲೊಮಾ, B.Sc, B.E/B.Tech ಅಥವಾ ಯಾವುದೇ ಸ್ನಾತಕೋತ್ತರ ಪದವಿ (PG) ಮುಗಿಸಿದ್ದರೆ ಈ ಹುದ್ದೆಗಳಿಗೆ ಅರ್ಹರಾಗಿರುತ್ತೀರಿ. ಒಟ್ಟು 21 ಹುದ್ದೆಗಳನ್ನು 5 ವಿವಿಧ ವಿಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ.

ವಯೋಮಿತಿ ಎಷ್ಟು?:

  • ಎಲ್ಲಾ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳು.
  • ನಿಯಮಗಳ ಪ್ರಕಾರ SC/ST/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಸಡಿಲಿಕೆ ಇರುತ್ತದೆ.

ಸಂದರ್ಶನ ನಡೆಯುವ ದಿನಾಂಕಗಳು (ಮಿಸ್ ಮಾಡ್ಕೋಬೇಡಿ!)

ಸಂದರ್ಶನವನ್ನು ಎರಡು ಬೇರೆ ಬೇರೆ ದಿನಾಂಕಗಳಲ್ಲಿ ಫಿಕ್ಸ್ ಮಾಡಲಾಗಿದೆ. ನಿಮ್ಮ ವಿಭಾಗಕ್ಕೆ ತಕ್ಕಂತೆ ಆಯಾ ದಿನದಂದೇ ಹಾಜರಾಗಬೇಕಿರುತ್ತದೆ:

ಸಂದರ್ಶನದ ದಿನಾಂಕಯಾವೆಲ್ಲಾ ವಿಭಾಗಗಳಿಗೆ ಅವಕಾಶ?
26 ಮೇ 2026 (ಇಂದು)ಎಲೆಕ್ಟ್ರಾನಿಕ್ಸ್ (ECE/EEE), ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ವಿಭಾಗದ ಹುದ್ದೆಗಳಿಗೆ.
29 ಮೇ 2026 (ಶುಕ್ರವಾರ)ಐಟಿಐ (Fitter/Turner), ಮೆಕ್ಯಾನಿಕಲ್, ಏರೋಸ್ಪೇಸ್ ಮತ್ತು ಏರೋನಾಟಿಕಲ್ ವಿಭಾಗದ ಹುದ್ದೆಗಳಿಗೆ.

ಗಮನಿಸಿ: ಸಂದರ್ಶನ ನಡೆಯುವ ದಿನದಂದು ಬೆಳಿಗ್ಗೆ 9:00 ಗಂಟೆಯಿಂದ 9:45 ರ ಒಳಗಾಗಿ ಸ್ಥಳದಲ್ಲಿಯೇ ನೋಂದಣಿ (Registration) ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ತಡವಾಗಿ ಬಂದರೆ ಅವಕಾಶ ಇರುವುದಿಲ್ಲ!

ಸಂದರ್ಶನ ನಡೆಯುವ ಸ್ಥಳ (Venue)

CSIR-NAL (RAB Meeting Complex),

ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಸ್,

ಎಸ್‌ಬಿಐ (SBI) ಬ್ಯಾಂಕ್ ಎನ್‌ಎಎಲ್ ಶಾಖೆಯ ಪಕ್ಕದಲ್ಲಿ,

ಕೋಡಿಹಳ್ಳಿ, ಬೆಂಗಳೂರು – 560017.

ಸಂದರ್ಶನಕ್ಕೆ ಹೋಗುವುದು ಹೇಗೆ? ಅರ್ಜಿ ಸಲ್ಲಿಸುವ ಸರಳ ವಿಧಾನ:

ಅಭ್ಯರ್ಥಿಗಳು ಯಾವುದೇ ಅಂಚೆ ಅಥವಾ ಇ-ಮೇಲ್ ಮೂಲಕ ಮುಂಚಿತವಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ನೇರವಾಗಿ ಸಂದರ್ಶನಕ್ಕೆ ಹೋಗಬೇಕು.

  1. ಹಂತ 1: ಎನ್‌ಎಎಲ್ ಅಧಿಕೃತ ವೆಬ್‌ಸೈಟ್ (www.nal.res.in) ಗೆ ಭೇಟಿ ನೀಡಿ, ಅಲ್ಲಿ ನೀಡಿರುವ ‘ನಿಗದಿತ ಅರ್ಜಿ ನಮೂನೆಯನ್ನು’ (Application Form) ಡೌನ್‌ಲೋಡ್ ಮಾಡಿ.
  2. ಹಂತ 2: ಅರ್ಜಿಯ ಪ್ರಿಂಟ್ ತೆಗೆದುಕೊಂಡು, ನಿಮ್ಮ ಎಲ್ಲಾ ಶೈಕ್ಷಣಿಕ ಹಾಗೂ ವೈಯಕ್ತಿಕ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ. ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋವನ್ನು ಅದರಲ್ಲಿ ಅಂಟಿಸಿ.
  3. ಹಂತ 3: ಭರ್ತಿ ಮಾಡಿದ ಅರ್ಜಿ ನಮೂನೆಗೆ ಸಹಿ ಮಾಡಿ, ಸಂದರ್ಶನದ ದಿನದಂದು ಎಲ್ಲಾ ಅಸಲಿ ದಾಖಲೆಗಳು ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ನೇರವಾಗಿ ಸಂದರ್ಶನದ ಸ್ಥಳಕ್ಕೆ ಹಾಜರಾಗಿ.

ಕಡ್ಡಾಯವಾಗಿ ತರಬೇಕಾದ ದಾಖಲೆಗಳ ಪಟ್ಟಿ:

  • ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ಯಾವುದೇ ಸರ್ಕಾರಿ ಗುರುತಿನ ಚೀಟಿ.
  • ಶೈಕ್ಷಣಿಕ ಅಂಕಪಟ್ಟಿಗಳು: ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ/ಸ್ನಾತಕೋತ್ತರ ಪದವಿಯ ಎಲ್ಲಾ ವರ್ಷಗಳ/ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಮತ್ತು ಪ್ರಶಸ್ತಿ ಪತ್ರಗಳು.
  • ಅನುಭವದ ಪ್ರಮಾಣಪತ್ರ: ಕೆಲಸ ಮಾಡಿದ ಅನುಭವ ಇದ್ದರೆ ಮಾತ್ರ (ಕಡ್ಡಾಯವಲ್ಲ).
  • ಜಾತಿ ಪ್ರಮಾಣಪತ್ರ: ವಯೋಸಡಿಲಿಕೆ ಮತ್ತು ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ಕಡ್ಡಾಯ.
  • NOC (ನಿರಾಕ್ಷೇಪಣಾ ಪತ್ರ): ಈಗಾಗಲೇ ಯಾವುದೇ ಸಿಎಸ್‌ಐಆರ್ (CSIR) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಮಾತ್ರ ಇದು ಅಗತ್ಯ.

ಬೆಂಗಳೂರಿನಲ್ಲೇ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶ ಇದಾಗಿದೆ. ಅರ್ಹ ಅಭ್ಯರ್ಥಿಗಳು ತಡ ಮಾಡದೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಿ. ನಿಮ್ಮ ಸ್ನೇಹಿತರಿಗೂ ಈ ಮಾಹಿತಿ ಶೇರ್ ಮಾಡಿ.

Leave a Comment