ತೈಲ ಬೆಲೆ : ಬೆಂಗಳೂರು ಸೇರಿದಂತೆ ಮೆಟ್ರೋಗಳಲ್ಲಿ 100 ರೂ. ದಾಟಿದ ಪೆಟ್ರೋಲ್, ನಿಮ್ಮೂರಿನ ಹೊಸ ದರ ಇಲ್ಲಿದೆ!

ದೇಶಾದ್ಯಂತ ಇಂಧನ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ವಾಹನ ಸವಾರರಿಗೆ ಬಹುದೊಡ್ಡ ಆಘಾತ ಎದುರಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಹಾಗೂ ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಉದ್ವಿಗ್ನತೆಯ ಪರಿಣಾಮವಾಗಿ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (OMCs) ಶುಕ್ರವಾರದಿಂದ (ಮೇ 15, 2026) ಅನ್ವಯವಾಗುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಿವೆ. ಈ ಏರಿಕೆಯ ನೇರ ಪರಿಣಾಮ ಬೆಂಗಳೂರಿನ ವಾಹನ ಸವಾರರ ಜೇಬಿಗೆ ಬಿದ್ದಿದೆ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಭಾರಿ ₹3.25 ರಷ್ಟು ಜಿಗಿದು ₹106.21 ಕ್ಕೆ ತಲುಪಿದೆ.

diesel petrol price hike in india

ಎಲ್ಲೆಲ್ಲಿ ಎಷ್ಟಾಗಿದೆ ಏರಿಕೆ?

ಮೆಟ್ರೋ ನಗರಗಳಾದ ಮುಂಬೈ, ಕೋಲ್ಕತ್ತಾ, ಮತ್ತು ಚೆನ್ನೈನಲ್ಲೂ ಪೆಟ್ರೋಲ್ ಬೆಲೆ ₹100ರ ಗಡಿ ದಾಟಿದೆ. ದೆಹಲಿ ಹೊರತುಪಡಿಸಿ ಇತರೆ ಪ್ರಮುಖ ಮೆಟ್ರೋಗಳಲ್ಲಿ ಪೆಟ್ರೋಲ್ ದರ ಗಗನಕ್ಕೆ ಏರಿದೆ. ದೆಹಲಿಯಲ್ಲಿ ₹3.00, ಕೋಲ್ಕತ್ತಾದಲ್ಲಿ ₹3.29, ಮುಂಬೈನಲ್ಲಿ ₹3.14, ಮತ್ತು ಚೆನ್ನೈನಲ್ಲಿ ₹2.83 ರಷ್ಟು ಏರಿಕೆಯಾಗಿದೆ.

ಇಂದಿನ ಪ್ರಮುಖ ಮೆಟ್ರೋ ನಗರಗಳ ಹೊಸ ಪೆಟ್ರೋಲ್ ದರಗಳು:

ನಗರ (City)ಏರಿಕೆಯಾದ ಮೊತ್ತ (Hike)ಹೊಸ ದರ (New Price)
ಬೆಂಗಳೂರು (Bengaluru)+ ₹3.25₹106.21
ದೆಹಲಿ (Delhi)+ ₹3.00₹97.77
ಕೋಲ್ಕತ್ತಾ (Kolkata)+ ₹3.29₹108.74
ಮುಂಬೈ (Mumbai)+ ₹3.14₹106.68
ಚೆನ್ನೈ (Chennai)+ ₹2.83₹103.67

ಇಂದಿನ ಪ್ರಮುಖ ಮೆಟ್ರೋ ನಗರಗಳ ಹೊಸ ಡೀಸೆಲ್ ದರಗಳು:

ನಗರ (City)ಏರಿಕೆಯಾದ ಮೊತ್ತ (Hike)ಹೊಸ ದರ (New Price)
ದೆಹಲಿ (Delhi)+ ₹3.00₹90.67
ಕೋಲ್ಕತ್ತಾ (Kolkata)+ ₹3.11₹95.13
ಮುಂಬೈ (Mumbai)+ ₹3.11₹93.14
ಚೆನ್ನೈ (Chennai)+ ₹2.86₹95.25

ಏಕಾಏಕಿ ತೈಲ ಬೆಲೆ ಏರಿಕೆಗೆ ಅಸಲಿ ಕಾರಣವೇನು?

ಭಾರತವು ತನ್ನ ಒಟ್ಟು ಕಚ್ಚಾತೈಲದ (Crude Oil) ಅವಶ್ಯಕತೆಯ ಸುಮಾರು ಶೇ. 90ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಪಶ್ಚಿಮ ಏಷ್ಯಾದಲ್ಲಿ (West Asia conflict) ನಡೆಯುತ್ತಿರುವ ಯುದ್ಧ ಮತ್ತು ಇರಾನ್ ಸಂಘರ್ಷದಿಂದಾಗಿ, ಜಾಗತಿಕ ඉంధನ ಪೂರೈಕೆ ಮಾರ್ಗಗಳಲ್ಲಿ ಉಂಟಾಗಿರುವ ಅಡಚಣೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಗೆ ಕಾರಣವಾಗಿದೆ.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಪ್ರಕಾರ, ಕಳೆದ 4 ವರ್ಷಗಳಿಂದ ದೇಶದಲ್ಲಿ ತೈಲ ಬೆಲೆಯಲ್ಲಿ ಭಾರಿ ಬದಲಾವಣೆಗಳಾಗಿರಲಿಲ್ಲ. ಆದರೆ, ಅಂತರಾಷ್ಟ್ರೀಯ ಬೆಲೆ ಮತ್ತು ದೇಶೀಯ ಬೆಲೆಯ ನಡುವಿನ ಅಂತರ ಗಣನೀಯವಾಗಿ ಹೆಚ್ಚಾಗಿದ್ದರಿಂದ, ತೈಲ ಮಾರಾಟ ಕಂಪನಿಗಳು (OMCs) ಪ್ರತಿದಿನ ಸುಮಾರು ₹1,000 ಕೋಟಿ ನಷ್ಟ ಅನುಭವಿಸುತ್ತಿದ್ದವು. ಸದ್ಯ ಕಂಪನಿಗಳ ಒಟ್ಟು ನಷ್ಟ ₹1.98 ಲಕ್ಷ ಕೋಟಿ ತಲುಪಿದ್ದು, ಈ ನಷ್ಟವನ್ನು ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿತ್ತು ಎಂದು ವಿವರಿಸಿದ್ದಾರೆ.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇದೆಯೇ?

ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ತೈಲ ಕೊರತೆಯಿಲ್ಲ ಎಂದು ತೈಲ ಕಾರ್ಯದರ್ಶಿ ನೀರಜ್ ಮಿತ್ತಲ್ ಸ್ಪಷ್ಟಪಡಿಸಿದ್ದಾರೆ. “ದೇಶದಲ್ಲಿ ಸರಿಸುಮಾರು 60 ದಿನಗಳಿಗೆ ಆಗುವಷ್ಟು ಪೆಟ್ರೋಲ್-ಡೀಸೆಲ್ ದಾಸ್ತಾನು ಇದೆ ಮತ್ತು 45 ದಿನಗಳಿಗೆ ಆಗುವಷ್ಟು ಎಲ್‌ಪಿಜಿ (LPG) ಸಂಗ್ರಹವಿದೆ. ಹೀಗಾಗಿ ವಾಹನ ಸವಾರರು ಆತಂಕಪಡುವ ಅಗತ್ಯವಿಲ್ಲ ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ ಯಾವುದೇ ರೇಷನಿಂಗ್ ಜಾರಿಯಾಗುವುದಿಲ್ಲ” ಎಂದು ಅವರು ಖಚಿತಪಡಿಸಿದ್ದಾರೆ.

ಮುಂದೇನು? ಮಿತ ಬಳಕೆಗೆ ಪ್ರಧಾನಿ ಮನವಿ

ಏತನ್ಮಧ್ಯೆ, ಆರ್‌ಬಿಐ ಗವರ್ನರ್ (RBI Governor) ಸಂಜಯ್ ಮಲ್ಹೋತ್ರಾ ಅವರು ಯುದ್ಧ ದೀರ್ಘಕಾಲ ಮುಂದುವರಿದರೆ ಸರ್ಕಾರವು ಹೆಚ್ಚಿನ ಆರ್ಥಿಕ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಬಹುದು ಎಂಬ ಮುನ್ಸೂಚನೆಯನ್ನು ನೀಡಿದ್ದರು. ಮತ್ತೊಂದೆಡೆ, ವಿದೇಶಿ ವಿನಿಮಯ ಮೀಸಲು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ; ಪೆಟ್ರೋಲ್, ಡೀಸೆಲ್ ಹಾಗೂ ಖಾದ್ಯ ತೈಲದ ಬಳಕೆಯನ್ನು ಆದಷ್ಟು ಮಿತವಾಗಿ ಮಾಡುವಂತೆ ಪ್ರಧಾನಿ ಮೋದಿಯವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಕಳೆದ 10 ದಿನಗಳ ಬೆಂಗಳೂರು ಪೆಟ್ರೋಲ್ ದರದ ಇತಿಹಾಸ

ಬೆಂಗಳೂರು ನಗರದಲ್ಲಿ ಕಳೆದ 10 ದಿನಗಳ ದರ ಪರಿಷ್ಕರಣೆಯ ಏರಿಳಿತಗಳ ಮಾಹಿತಿ ಇಲ್ಲಿದೆ:

ಬೆಂಗಳೂರು ಪೆಟ್ರೋಲ್ ದರ: ಕಳೆದ 10 ದಿನಗಳ ರಿಪೋರ್ಟ್

ದಿನಾಂಕ (Date)ಬೆಲೆ (Price)ಬದಲಾವಣೆ (Change)
ಮೇ 15, 2026 (ಇಂದು)₹106.21+ ₹3.25
ಮೇ 14, 2026₹102.96+ ₹0.04
ಮೇ 13, 2026₹102.92₹0.00
ಮೇ 12, 2026₹102.92₹0.00
ಮೇ 11, 2026₹102.92₹0.00
ಮೇ 10, 2026₹102.92₹0.00
ಮೇ 9, 2026₹102.92₹0.00
ಮೇ 8, 2026₹102.92₹0.00
ಮೇ 7, 2026₹102.92₹0.00
ಮೇ 6, 2026₹102.92– ₹0.04
ಮೇ 5, 2026₹102.96+ ₹0.04

Leave a Comment